ಇಂದು ಕಳಸ ತಾಲೂಕು ಕಾರಗದ್ದೆ ಕಾರ್ಯಕ್ಷೆತ್ರದಲ್ಲಿ ಯಂತ್ರಶ್ರೀ ಕಾರ್ಯಕ್ರಮದಡಿ ಬಿಜೋಪಚಾರ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಸುರೇಶ್ ಅವರು ಉದ್ಘಾಟಿಸಿ, ಪ್ರಸ್ತುತ ಸಮಯದಲ್ಲಿ ಭತ್ತ ಬೆಳೆಯಲು ಹಿಂದೇಟು ಹಾಕುತ್ತಿರುವ ರೈತರಿಗೆ ಯಂತ್ರಶ್ರೀ ಕಾರ್ಯಕ್ರಮದಿಂದ ಕಡಿಮೆ ಖರ್ಚು, ಹೆಚ್ಚು ಇಳುವರಿ ಪಡೆಯುವ ಬಗ್ಗೆ ಪ್ರಾಸ್ತವಿಕ ನುಡಿಗಳನ್ನು ಹೇಳಿದರು. ಕೃಷಿ ಇಲಾಖೆ ಅಧಿಕಾರಿ ಪೌದನ್ ಅವರು ಯಾವುದೇ ಬೆಳೆ ಬೆಳೆಯುವ ಮುಂಚಿತವಾಗಿ ಬಿಜೋಪಚಾರ ಅತಿ ಮುಖ್ಯ ಹಾಗು ರೈತರು ಔಷದಿ ಸಿಂಪರಣೆ ಸಮಯ ಮುಂಜಾಗ್ರತೆ ವಹಿಸಬೇಕು, ಮತ್ತು ಪಸಲ್ ಭೀಮ ಯೋಜನೆ ಕುರಿತು ಮಾಹಿತಿ ನೀಡಿ,ಕೃಷಿ ಇಲಾಖೆ ಯಿಂದ ಸಿಗುವ ಸೌಲಭ್ಯದ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಭತ್ತದ ಬಿಜೋಪಚಾರ ಮಾಡುವ ಕುರಿತು ತಾಲೂಕು ಕೃಷಿ ಮೇಲ್ವಿಚಾರಕ ರವಿಚಂದ್ರ ಅವರು ಪ್ರಾತ್ಯಕ್ಷತೆ ತೋರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ದಿವ್ಯಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಗ್ರಾಮ ಪಂಚಾಯತ್ ಸದಸ್ಯರು ಭಾಸ್ಕರ್, ವಾಮನ, ಲೋಕಣ್ಣ, ಊರಿನ ಗಣ್ಯರು ಸಂದೀಪ್, ಶೌರ್ಯ ವಿಪತ್ತಿನ ಸದಸ್ಯರು ಪದ್ಮ,ಲತಾ, ವಿನುತಾ, ದ್ಯಾಮಪ್ಪ ವಾಪ್ರತಿನಿಧಿ ಉಷಾ, ಪಶು ಸಖಿ ಸ್ಮಿತಾ, ಯಂತ್ರಶ್ರೀ ಅನುಷ್ಠಾನ ಮಾಡುವ ರೈತರಾದ ಯೋಗೀಶ್, ರಮೇಶ್, ರಾಜೇಶ್, ಜಗದೀಶ್ ಭಟ್, VLE ವಿದ್ಯಾ, ಇದ್ದು,ಕಾರ್ಯಕ್ರಮವನ್ನು ರವಿಚಂದ್ರ ನಿರೂಪಿಸಿ, ಉಷಾ ಧನ್ಯವಾದ ನೀಡಿದರು🌾🌾🌾