ಈ ದಿನ ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಅಡಕಿ ವಲಯದ ಗೋಪಾನಪಲ್ಲಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇಡಂ ತಾಲೂಕು ಹಾಗೂ ಲಿಗಂಪಲ್ಲಿ ಗ್ರಾಮ ಪಂಚಾಯತ್ ಮತ್ತು ಕೆರೆ ಅಭಿವೃದ್ಧಿ ಸಮಿತಿ ಗೋಪಾನಪಲ್ಲಿ ಇವರ ಸಂಯುಕ್ತ ಆಶ್ರಯದಲ್ಲಿ ಗೋಪಾನಪಲ್ಲಿ ಗ್ರಾಮದ ದೇವಿಕೆರೆ ಕಾಮಗಾರಿ ಮತ್ತು ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯೋಜನೆಯ ಕಲ್ಬುರ್ಗಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಗಣಪತಿ ಮಾಳಂಜಿ ಸರ್ ಅವರು 🪔🪔🪔ದೀಪ ಬೆಳಗಿಸುವ ಮೂಲಕ ನೆರವರಿಸಿ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕರ್ನಾಟಕದಲ್ಲಿ 820 ಕೆರೆಗಳನ್ನು ರೈತರ ಹಾಗೂ ಗ್ರಾಮಸ್ಥರ ಸಹಕಾರದಿಂದ ಹೊಳುತ್ತಲಾಗಿದೆ. ಯೋಜನೆಯಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಷ. ಭ್ರ. ಸೋಮಸಿದ್ದೇಶ್ವರ ಶಿವಾಚಾರ್ಯರು.
ಶ್ರೀ ಸೋಮೇಶ್ವರ ಸಿದ್ದಸಂಸ್ಥಾನ, ಗುಂಡೇಪಲ್ಲಿ (k) ಕ್ಷೇತ್ರದಿಂದ ಆಗುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವ್ಯಕ್ತಪಡಿಸಿದರು. ತಾಲೂಕಿನ ಯೋಜನಾಧಿಕಾರಿಗಳಾದ ಮಂಜುನಾಥ್ ಎಸ್.ಜಿ ಕೆರೆ ಸಮಿತಿಯ ಅಧ್ಯಕ್ಷರಾದ ಗುರುನಾಥ್ ರೆಡ್ಡಿ , ಗ್ರಾಮ ಪಂಚಾಯಿತಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಶಿವಕುಮಾರ್ ಪಾಟೀಲ್, ವಲಯದ ಮೇಲ್ವಿಚಾರಕರು ಹೊನ್ನಪ್ಪ ಗೌಡ, ತಾಲೂಕು ವಿಚಕ್ಷಣಾಧಿಕಾರಿ ಮಂಜುನಾಥ್, ಕೃಷಿ ಮೇಲ್ವಿಚಾರಕರು ರಾಹುಲ್, csc ಸೇವಾದಾರರು ಕೆರೆ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಊರಿನ ಗುರುಹಿರಿಯರು ಉಪಸ್ಥಿತರಿದ್ದರು.
©2024 The Karnataka Xpress WordPress Video Theme by WPEnjoy